About :
ಯುವ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, kಕೇರಳ ರಾಜ್ಯದ ಕಾಸರುಗೋಡು ಜಿಲ್ಲೆಯ ಕಾಟುಕುಕ್ಕೆ ಗ್ರಾಮನಿವಾಸಿ. ಗಡಿನಾಡು ಕನ್ನಡಿಗ. ಸರಳ ಸಜ್ಜನಿಕೆಯ ವ್ಯಕ್ತಿತ್ವದ 'ಕಾಟುಕುಕ್ಕೆ'ಯವರು, ಬಾಲ್ಯದಿಂದಲೂ ಕನ್ನಡದಲ್ಲಿ ದೇವರ ಭಜನೆ, ಮತ್ತು ಶಾಸ್ತ್ರೀಯ ಸಂಗೀತದ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದಾರೆ. ರಾಮಕೃಷ್ಣರ ತಂದೆ, ಕಾಟುಕುಕ್ಕೆ ನಾರಾಯಣ ರಾವ್, ತಾಯಿ ರತ್ನಾವತಿ ರಾವ್ ಪತ್ನಿ,ಉಮಾರಾವ್ ಆದಿತ್ಯ, ಕವನ ಎಂಬ ಇಬ್ಬರು ಮಕ್ಕಳು. ಭಜನೆ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ಪರಮಾಸಕ್ತಿ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನು ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ ರಿಂದ ಕಲಿತರು. ಯೋಗೀಶ್ ಶರ್ಮರವರು, ಮಂಗಳೂರು ಆಕಾಶವಾಣಿಯ ’ಬಿ ಗ್ರೇಡ್’ ಕಲಾವಿದ. ರಾಜ್ಯ ಹೊರರಾಜ್ಯ, ಮುಂಬಯಿಮಹಾನಗರದಲ್ಲೂ ದಾಸ ಸಂಕೀರ್ತನೆ, ಭಕ್ತಿಗಾನ ರಸಮಂಜರಿ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟು ಕಲಾರಸಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ೨೫೦ ಕ್ಕೂ ಹೆಚ್ಚು ದಾಸರ ಪದಗಳಿಗೆ ಸ್ವರಸಂಯೋಜಿಸಿ ಹಾಡಿ ಸುಮಾರು ೧೫೦ ಕ್ಕೂ ಮಿಗಿಲಾಗಿ ದಾಸರ ಪದಗಳಿಗೆ ಹಾಗೂ ಭಕ್ತಿಗೀತೆಗಳ ಧ್ವನಿ ಸುರುಳಿಗಳು ಬಿಡುಗದೆಗೊಂದು ಕನ್ನಡ ನಾಡಿನಾದ್ಯಂತ ಮನೆಮತಾಗಿದ್ದಾರೆ. ಇವರು ಹಾಡಿದ ’ತಿರುಪತಿ ವೆಂಕಟರಮಣ’ ಮತ್ತು ’ಕಣ್ಣಿನೊಳಗೆ ನೋಡು’ ಸಿಡಿ ಕ್ಯಾಸೆಟ್ ಗಳು ತಲಾ ೨ ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ಸೃಷ್ಟಿಸಿವೆ.
ವೃತ್ತಿಜೀವನ
ಸಂಪಾದಿಸಿ
'ರಾಮಕೃಷ್ಣ ಕಾಟುಕುಕ್ಕೆ', 'ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯ'ದಲ್ಲಿ ಉದ್ಯೋಗದಲ್ಲಿದ್ದರು. ಇದು ಕೇರಳದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ. 'ಶ್ರೀ ತಿರುಮಲ ದೇವಸ್ಥಾನಕ್ಕೆ ಆಹ್ವಾನಿತ ಗಾಯಕ'ರಾಗಿ , 'ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಭಜನಾ ತರಪೇತಿ ನೀಡುವ ಸಂಪನ್ಮೂಲ ವ್ಯಕ್ತಿ'ಯಾಗಿದ್ದಾರೆ. ಈ ಕಾರ್ಯಗಳ ಮಧ್ಯೆ 'ಶ್ರೀಪುರುಂದರದಾಸ ಆರಾಧನಾ ಮಹೋತ್ಸವ ಸಮಿತಿ' ರಚಿಸಿ ನಿಷ್ಠೆಯಿಂದ ಆರಾಧನೋತ್ಸವ ನಡೆಸಿ ಸತತ ಭಜನೆ, ಕೀರ್ತನೆ, ಸತ್ಸಂಗಗಳ ಮೂಲಕ ನಾಡಿನ ಜನರ ದೈವಿಕ ಚೈತನ್ಯವೃದ್ಧಿಗೆ ಪ್ರೇರಕರಾಗಿದ್ದಾರೆ.
ಬಿಡುಗಡೆಗೊಂಡ ಧ್ವನಿ ಸುರಳಿಗಳ ಪಟ್ಟಿ :
-
1- ಧರ್ಮಕ್ಕೆ ಕೈಬಾರದೀಕಾಲ(ತಿರುಪತಿ ವೆಂಕಟರಮಣ)
-
2-ಕಣ್ಣಿನೊಳಗೆ ನೋಡು (ಹುಟ್ಟಿದೇಳು ದಿವಸದಲಿ)
-
3-ದಾಸ ನಮನ (ಭಜನಾ ಶೈಲಿಯ ಗೀತೆಗಳು)
-
4-ಗೋಪಿಯ ಭಾಗ್ಯವಿದು (ಹಣ್ಣು ತಾ ಬೆಣ್ಣೆ ತಾ)
-
5-ಕರುಣಾಸಾಗರ ಶ್ರೀಹರಿ (ಜಯ ಜಯ ಕೃಷ್ಣ)