- Written by: ramakrishna
- February 7, 2024
ಎಲ್ಲಾ ಭಜಕ ಭಗವದ್ಭಕ್ತ ಬಂಧುಗಳಿಗೆ ನಮಸ್ಕಾರಗಳು.
ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ದಕ್ಷಿಣ ಕನ್ನಡ ಹಾಗೂ ಶ್ರೀ ಪುರಂದರದಾಸರ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಕಾಸರಗೋಡು ಇವೆರಡರ ನೇತೃತ್ವದಲ್ಲಿ ಕಾಟುಕುಕ್ಕೆಯಲ್ಲಿ ಸುಮಾರು 15 ವರ್ಷಗಳಿಂದ ದಾಸಶ್ರೇಷ್ಠರಾದಂತಹ ಪುರಂದರದಾಸರ ಆರಾಧನೋತ್ಸವವು ಭಜನೋತ್ಸವದ ಮೂಲಕ ನಡೆದುಕೊಂಡು ಬರುತ್ತಾ ಇದೆ.
ದಕ್ಷಿಣ ಕನ್ನಡ , ಕಾಸರಗೋಡು , ಉಡುಪಿ , ಉತ್ತರ ಕನ್ನಡ ಜಿಲ್ಲೆ ಹಾಗೂ ಮುಂಬಯಿ ನಗರಗಳಲ್ಲಿ ನಮ್ಮ ಭಜನಾ ಗುರುಗಳಾದಂತಹ ಮಧ್ವಾದೀಶ ವಿಠಲದಾಸ ನಾಮಾಂಕಿತರಾದ ರಾಮಕೃಷ್ಣ ಕಾಟುಕುಕ್ಕೆ ಯವರು ಅನೇಕ ಭಜನಾ ಮಂಡಳಿಗಳಿಗೆ ತರಬೇತಿ ನೀಡಿ ಸಂಘಟಿಸಿರುತ್ತಾರೆ .
ಸರಿ ಸುಮಾರು 300 ಕ್ಕೂ ಹೆಚ್ಚು ಮಂಡಳಿಗಳು ಇವತ್ತು ಸಕ್ರಿಯವಾಗಿ ಭಜನಾ ತರಬೇತು ಪಡೆದು ಸ್ವತಃ ಮಂಡಳಿಯನ್ನು ರಚಿಸಿಕೊಂಡು, ಆ ಮೂಲಕವಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದಲ್ಲದೇ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್, ಶೃಂಗೇರಿಯ ಭಜನಾ ಪದ್ಧತಿ, ಶ್ರೀಕ್ಷೇತ್ರ ಧರ್ಮಸ್ಥಳದ ಭಜನಾ ತರಬೇತಿ ಕಮ್ಮಟ ಹೀಗೆ ಇನ್ನೂ ಅನೇಕ ಮಠ ಮಂದಿರ ಸಂಘ ಸಂಸ್ಥೆಗಳಲ್ಲಿ ಭಜನಾ ತರಬೇತುಧಾರರಾಗಿ ನಮ್ಮ ಭಜನಾ ಗುರುಗಳು ಭಜನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೊತೆಗೆ ಇವರೆಲ್ಲರ ಸಹಕಾರ ಪಡೆದುಕೊಂಡು ವರ್ಷಂಪ್ರತಿ ಕಾಟುಕುಕ್ಕೆಯಲ್ಲಿ ಪುರಂದರದಾಸರ ಆರಾಧನೆಯನ್ನು ಮಾಡುತ್ತಾ ಬರುತ್ತಾ ಇದ್ದಾರೆ.
ಈ ವರುಷ ಅಂದರೆ 09-02- 2024 ನೇ ಶುಕ್ರವಾರ ಪುರಂದರದಾಸರ ಆರಾಧನೆ ನಡೆಯಲಿದೆ. ಈ ಕಾರ್ಯಕ್ರಮದ ವಿಶೇ ಷವಾಗಿ …..
2009 ರಲ್ಲಿ ಪ್ರಾರಂಭವಾದಂತಹ ದಾಸಸಂಕೀರ್ತನ ಯಾತ್ರೆಯು 1000 ದ ಸಂಖ್ಯೆಯನ್ನು ತಲಪುತ್ತಿದ್ದಾರೆ. ಇದು ಅತ್ಯಂತ ಸಂತೋಷದ ಭಕ್ತಿ ಸಮರ್ಪಣೆಯ ಸಂಭ್ರಮದ ಕ್ಷಣವೂ ಹೌದು.
ಪರಮಪೂಜ್ಯ ಶ್ರೀಮದ್ ಜಗದ್ಗುರು ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಸಂಪನ್ನ ಗೊಳ್ಳಲಿದೆ. ಜೊತೆಗೆ ಕಾಟುಕುಕ್ಕೆಯ ಆರಾಧ್ಯ ಮೂರ್ತಿ ಶ್ರೀ ಸುಬ್ರಾಯ ದೇವರಿಗೆ ವಿಶೇಷ ಸೇವೆಯನ್ನು ಕೂಡಾ ಸಂಕಲ್ಪಿಸಿಕೊಂಡು 1000 ದ ಸಂಕೀರ್ತನಾ ಸಮರ್ಪಣೆಗಾಗಿ ನಮ್ಮ ಗುರುಗಳು ಪುರಂದರದಾಸರ ನೂತನ 5 ಹಾಡುಗಳ ನ್ನು ಹಾಡಿ ಕಲಿಸಿ ತರಬೇತುಗೊಳಿಸಿದ ಭಜನಾರ್ಥಿಗಳು ಸಹಸ್ರ ಸಂಖ್ಯೆಯಲ್ಲಿ, ( 1500ಕ್ಕೂ ಮೇಲ್ಪಟ್ಟು ) ಸಮವಸ್ತ್ರ ಧರಿಸಿ ಏಕ ಕಂಠದಿಂದ ಸಾಮೂಹಿಕವಾಗಿ ಹಾಡಿ ಸಮರ್ಪಣೆ ಮಾಡಲಿದ್ದಾರೆ.ಎಲ್ಲರೂ ಕೂಡಾ ಒಂದೇ ಬಾರಿಗೆ ಏಕ ಕಂಠದಲ್ಲಿ ಸಾಮೂಹಿಕವಾಗಿ ಹಾಡುವಂತಹ ವಿಶೇಷ ಕಾರ್ಯಕ್ರಮ ಹಾಗೂ ಭಜನಾ ಕ್ಷೇತ್ರದಲ್ಲೇ ಒಂದು ನೂತನವಾದ ಕಾರ್ಯಕ್ರಮವಾಗಿ ಮೂಡಿಬರಲಿದೆ. ಈ ಕಾರ್ಯಕ್ರಮಕ್ಕೆ ಅಂದಾಜು 5000 ದಷ್ಟು ಭಗವದ್ಬಕ್ತರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನೇಕ ಮಠ ಮಂದಿರಗಳಲ್ಲಿ ದೇವಸ್ಥಾನಗಳಲ್ಲಿ ನಡೆಸಿದ ಭಜನಾ ಕಮ್ಮಟದಲ್ಲಿ ಕಲಿತಂತಹ ಎಲ್ಲಾ ಭಜಕರು, ಧಾರ್ಮಿಕ ಮುಂದಾಳುಗಳು, ದಾನಿಗಳು, ಅನೇಕ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಾಯೋಜಕರಾಗಿ ಸಹಕರಿಸಿದ ಕಲಾ ಪೋಷಕರಾದ ತಾವೆಲ್ಲರು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡಬೇಕೆಂದು ಹಾಗೂ ಈ ಕಾರ್ಯಕ್ರಮದಲ್ಲಿ ಬಂದು ಉಪಸ್ಥಿತರಿದ್ದುಕೊಂಡು ಆರ್ಥಿಕ ಸಹಾಯ ನೀಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಬೇಕೆಂದು ಕೇಳಿಕೊಳ್ಳುತ್ತೇವೆ.
ಎಲ್ಲರಿಗೂ ಕೂಡಾ ಆ ಭಗವಂತ ಒಳಿತನ್ನು ಮಾಡಲಿ… ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳುವ ಶಕ್ತಿ ಭಜನೆಗೆ ಇದೆ. ಕಲಿಯುಗದ ಪುರಂದರದಾಸ ರೆಂದೇ ಅನೇಕರಿಂದ ಕರೆಸಿಕೊಂಡ ಮಧ್ವಾದೀಶ ವಿಠಲದಾಸ ನಾಮಾಂಕಿತ ನಮ್ಮ ಪ್ರೀತಿಯ ಗುರುಗಳು ಇಡೀ ಜೀವನವನ್ನು ಭಜನೆಗಾಗಿ ಮುಡಿಪಿಟ್ಟು…ಸರಳ ಸಜ್ಜನಿಕೆಯ ಸಾಕಾರ ವ್ಯಕ್ತಿತ್ವವನ್ನು ತನ್ನದಾಗಿಸಿಕೊಂಡು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ನುಡಿಗೆ ಮಾದರಿಯಾದವರು…ಒಂದಲ್ಲಾ ಒಂದು ಸದ್ವಿಚಾರಗಳೊಂದಿಗೆ ತನ್ನ ಶಿಷ್ಯರನ್ನು ತಿದ್ದುತ್ತಾ…ಎಲ್ಲರ ಬದುಕಲ್ಲೂ ನೆಮ್ಮದಿಯ ಬದುಕನ್ನು ಕಂಡು ಕೊಳ್ಳಲು ಕಾರಣರಾದವರು…ಅಂತಹ ಗುರುಗಳ ದಾಸ ಸಂಕೀರ್ತನಾ ಯಾನದ 1000 ಸಂಕೀರ್ತನೆಯ ಸಮರ್ಪಣಾ ಸಂಭ್ರಮದ ಕ್ಷಣ…ಈ ಕ್ಷಣಕ್ಕೆ ನಾವೆಲ್ಲರೂ ಜೊತೆಸೇರಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕಾರವನ್ನು ನೀಡೋಣ..
ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿಯ ದಶಮಾನೋತ್ಸವದ ಸಂದರ್ಭದಲ್ಲಿ (2018ರಲ್ಲಿ) 500 ನೇ ದಾಸ ಸಂಕೀರ್ತನಾ ಯಾನದ ಕಾರ್ಯಕ್ರಮ ಅಂಗವಾಗಿ ದಾಸಸಾಹಿತ್ಯ ಪ್ರಾಜೆಕ್ಟ್ ತಿರುಪತಿ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ವನ್ನು ಭಜಕರ ಸಹಕಾರದಿಂದ ತಿರುಪತಿಯಿಂದಲೇ ದೇವರನ್ನು ಭರಿಸಿ ಮಾಡಿದ ಹಿರಿಮೆ ನಮ್ಮ ಭಜನಾ ಗುರುಗಳದು…ಅದಕ್ಕೂ ಸಹಾ ನಾವು ನಿರೀಕ್ಷೆ ಮಾಡಿದಕ್ಕಿಂತಲೂ ಹೆಚ್ಚಿನ ಪ್ರೋತ್ಸಾಹ, ಸಹಕಾರಗಳು ಭಜಕರಿಂದ, ಭಗವಧ್ಭಕ್ತರಿಂದ ಸಿಕ್ಕಿದೆ.
ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಎಲ್ಲರ ಪ್ರೋತ್ಸಾಹ ಸಹಕಾರವಿರಲಿ ಎಂದು ಮತ್ತೊಮ್ಮೆ ಆಶಿಸುತ್ತೇವೆ
ಸಪ್ರೇಮ ವಂದನೆಗಳು.
ಶ್ರೀಗುರುಭ್ಯೋನಮಃ
ಹರೇ ರಾಮ …
ಹರೇ ಶ್ರೀನಿವಾಸ.
ನಿಮ್ಮೆಲ್ಲರ ಪ್ರೀತಿಯ ಸಹಕಾರ ವನ್ನು ಸಮಿತಿಯ QR code ಗೆ Scan ಮಾಡುವ ಮೂಲಕ ಅಥವಾ ನೇರವಾಗಿ Google pay ಸಂಖ್ಯೆ 9447652929 ಗೆ pay ಮಾಡಿ ದೇಣಿಗೆಯ ಆರ್ಥಿಕ ಸಂದಾಯ ಮಾಡಬಹುದಾಗಿದೆ…